ಬಹಳ ದಿನಗಳಾಯ್ತು ಏನಾದ್ರು ಬರಿಯೋಣ ಅಂತ ಅಂದುಕೊಳ್ತಾ ಇದ್ದೆ ಅದಕ್ಕೆ ಇಂದು ಸಮಯ ಸಿಕ್ತು.ಬರಿಯೋದೆಲ್ಲ ಹೌದು ಆದ್ರೆ ಏನು ಬರಿಯೋದು ಅಂತ ಯೋಚಿಸದೆ ಸ್ಟಾರ್ಟ್ ಮಾದುತ್ತಿದ್ದೇನೆ .. ನೋಡೋಣ ಇದು ಎಲ್ಲಿಗೆ ಹೋಗಿ ತಲುಪೊತ್ತೆ ಅಂತ...ನನ್ನಬಗ್ಗೆ ಹೇಳುವಂತದ್ದು ಏನು ಇಲ್ಲ.. ಆದರೂ ನಾನು ನಡೆದು ಬಂದ ದಾರಿಯ ಬಗ್ಗೆ ಚಿಕ್ಕದಾಗಿ ಬರೆಯಲು ಪ್ರಯತ್ನಿಸುತ್ತೇನೆ...
ಯಲ್ಲಾಪುರ ತಾಲೂಕಿನ ಬಿಸ್ಗೋಡು ಎನ್ನೋ ಪುಟ್ಟ ಗ್ರಾಮ ಅಲ್ಲಿ ಬೋಳ್ಗುಡ್ಡೆ ಅನ್ನೋ ತುಂಬಿದ ಮನೆಯಲ್ಲಿ ನನ್ನ ಬಾಲ್ಯ ಕಳದಿದ್ದು, ಅಣ್ಣ ದತ್ತಾತ್ರೇಯ, ತಂಗಿ ಸಾವಿತ್ರಿ , ಅಪ್ಪ ಶಿವರಾಮ ಭಟ್ , ಅಮ್ಮ ಸೀತಾ ಭಟ್ ಹಾಗು ಅಜ್ಜ ಅಜ್ಜ್ಜಿಯರ ಜೊತೆಯಲ್ಲಿ. ಉದ್ಯೋಗ ಕ್ರಷಿ. ಮುಖ್ಯ ಬೆಳೆ ಅಡಿಕೆ,ತೆಂಗು,ಬಾಳೆ ಹಾಗು ಬತ್ತ. ಮನೆಯಲ್ಲಿ ಎಲ್ಲರ ಪ್ರೀತಿಯವನಾಗೆ ಹೊರಗಿನ ಪ್ರಪಂಚದ ಅರಿವಿಲ್ಲದಂತೆ ಬಾಲ್ಯವನ್ನು ಕಳೆದೆ. ೧೦ ನೇ ತರಗತಿಯ ವರೆಗಿನ ವಿಧ್ಯಾಬ್ಯಾಸ ಎಲ್ಲ ಬಿಸಗೋಡಿನಲ್ಲೇ ಮುಗಿಯಿತು. ನಂತರದ ೨ ವರ್ಷ 2nd PU. ಓದಿದ್ದು ಯಲ್ಲಾಪುರದಲ್ಲಿ.
ಮೊದಲ ಸಲ ಮನೆಯಿಂದ ಹೊರಗಡೆ ಹೋಗಿದ್ದು BSc. ಓದೋದಕ್ಕೆ ಧಾರವಾಡಕ್ಕೆ ಹೋದಾಗ.. ಇಲ್ಲಿಯವರೆಗೆ ಮನೆ ಬಿಟ್ಟು ೧ ದಿನವು ಹೊರಗಡೆ ಉಳಿದದ್ದೇ ಇಲ್ಲ.. ಯಾರದೇ ನೆಂಟರು/ಗೆಳೆಯರ ಮನೆಗೂ ಹೋಗಿದ್ದು ಬಹಳ ಕಡಿಮೆ. ಅದಕ್ಕೆ ಇರಬೇಕು ಮೊದಲಿನಿಂದಲೂ ವಿದ್ಯಾಭ್ಯಾಸದಲ್ಲಿ ಸೈ ಅನಿಸಿಕೊಂಡಿದ್ದ ನಾನು ಇಲ್ಲಿ ಮೊದಲಬಾರಿಗೆ ಓದಿನಕಡೆ ಅಷ್ಟಾಗಿ ಗಮನ ಕೊಡಲಿಲ್ಲ. ಆದರು ಹೇಗೋ ಗೆಳಯರ ಸಹಾಯದಿಂದ ಡಿಗ್ರಿ ಮೂರೇ ವರ್ಷದಲ್ಲಿ ಮುಗಿಸಿದೆ. ಧಾರವಾಡ ನನ್ನ ಪಾಲಿಗೆ ಬಹಳಷ್ಟು ವಿಷಯವನ್ನ ಕಲಿಸಿಕೊಟ್ಟ ಸ್ಥಳ. ಮೊದಲ ಬಾರಿಗೆ ನಾನು ಹೊರಜಗತ್ತನ್ನು ನೋಡಿದಂತಹ ಸ್ಥಳ. ಅದಕ್ಕೆ ಇರಬೇಕು ನಮ್ಮೂರಿನ ನಂತರ ನಾನು ಇಷ್ಟ ಪಡುವಂತಹ ಸ್ಥಳ ಇದು.
ನಾನು MCA ಓದಿದ್ದು ಬೆಳಗಾವಿಯ KLE ಇಂಜಿನಿಯರಿಂಗ್ ವಿದ್ಯಾ ಸೌಸ್ಥೆಯಲ್ಲಿ. ನನಗೆ ಇಲ್ಲಿ ಹೆಚ್ಚಿಗೆ ಏನೂ ತೊಂದರೆ ಅನ್ನಿಸಲಿಲ್ಲ.. ನಾನು ಇಲ್ಲಿಗೆ ಬರುವಾಗ ನನಗಾಗಲೇ ನನ್ನ ತಪ್ಪಿನ ಅರಿವಾಗಿತ್ತು. ನಾನು ಇಲ್ಲಿ ಓದಿನಲ್ಲಿ ಹೆಚ್ಚಿನ ಶ್ರದ್ದೆ ವಹಿಸಿದೆ, ಉತ್ತಮ ಶ್ರೇಣಿಯಲ್ಲಿ ಕೂಡ ಪಾಸಾದೆ.ನಾನು ಇಲ್ಲಿ ಗಳಿಸಿದ ಅತ್ಯುತ್ತಮ ಆಸ್ತಿ ಎಂದರೆ ನನ್ನ ಗೆಳೆಯರು. ಜೀವದ ಗೆಳೆಯರು.. ಜೀವಕ್ಕೆ ಜೀವ ಕೊಡುವಂತವರು..
ಬೆಳಗಾವಿಯಿಂದ ನೇರ ಬಂದಿದ್ದು ಬೆಂಗಳೊರಿಗೆ. ಮೊದಲ ಬಾರಿ ಏನೇನೋ ನಿರೀಕ್ಷೆಯನ್ನು ಇಟ್ಟುಕೊಂಡು ರಾಜಧಾನಿಗೆ ಬಂದಿದ್ದೆ. ಅತ್ತಮ ಅಂಕಗಳನ್ನು ಗಳಿಸಿದ್ದೇನೆ, ಕೆಲಸಕ್ಕೆ ಏನು ಮೋಷ ಇಲ್ಲ ಅಂದು ಕೊಂಡಿದ್ದೆ. ಇಸ್ಟೆಲ್ಲಾ ನಿರೀಕ್ಷೆಯಲ್ಲಿ ಬಂದ ನಮಗೆ ಇಲ್ಲಿ ಮೊದಲು ಸಿಕ್ಕಿದ್ದು ಕೇವಲ ನಿರಾಶೆ,ಹತಾಶೆ... ಕೆಲಸವಿಲ್ಲದೆ ಕಳೆದಂತಹ ಆ ದಿನಗಳು, ಎಂದೆಂದಿಗೂ ಮರೆಯಲಾರದಂಥ ದಿನಗಳು. ಇಲ್ಲಿ ಮತ್ತೆ ನನ್ನ ಸಹಾಯಕ್ಕೆ ನಿಂತವರು ಅದೇ ನನ್ನ ಗೆಳೆಯರು..
ಮೊದಲ ಬಾರಿಗೆ ನಾನು ಕೆಲಸ ಸೇರಿದ್ದು ಅಪೂರ್ವ ಇನ್ಫೊ ಸಿಸ್ಟಂ ಅನ್ನೋ ಜಯನಗರದ ಒಂದು ಚಿಕ್ಕ ಕಂಪನಿಯಲ್ಲಿ. ನನ್ನಪಾಲಿಗೆ ಹೇಳಬೇಕಾದರೆ Well beginning is half done ಅನ್ನೋ ಹಾಗೆ ಸ್ವಲ್ಪ ತಡವಾದರೂ ಉತ್ತಮ ಪ್ರಾರಂಭವೇ ಸಿಕ್ಕಿತು. ಇಲ್ಲಿ ಸೇರಿ ಮೂರನೇ ತಿಂಗಳಿಗೆ ನನಗೆ ಸಿಕ್ಕ ಮೊದಲ ಸಂಭಾವನೆ ರೂ. ೩೦೦೦. ನನಗೆ ಕೊಟ್ಟ ಕೆಲಸವನ್ನ ಶ್ರದ್ದೆಯಿಂದ ಮಾಡಿದೆ, ಬಹಳಸ್ತು ವಿಷಯಗಳನ್ನು ಕಲಿತೆ. ಇದು ನನ್ನ ಎಲ್ಲ ಮುಂದಿನ ಸಾಧನೆಗೆ ಅಡಿಪಾಯವಾಯ್ತು ಅನ್ನೋದಕ್ಕೆ ಎರಡು ಮಾತಿಲ್ಲ.
ಇಲ್ಲಿಂದ ಮುಂದಿನ journey ದುಬೈಗೆ, ಪೆರೋಟ ಸಿಸ್ಟೆಮ್ಸ್ ಅನ್ನೋ ಕಂಪನಿಗೆ ಸೇರಿದ ಒಂದೇ ವಾರದಲ್ಲಿ ದುಬೈಗೆ ಪ್ರಯಾಣ , ಮೊದಲ ಬಾರಿಗೆ ವಿದೇಶ ಪ್ರಯಾಣ ತುಂಬಾನೇ ಹೆದರಿಕೆ ಇತ್ತು. ಆದ್ರೆ ಕೆಲವೇ ದಿನಗಳಲ್ಲಿ ನನ್ನ ಪಾಲಿಗೆ ಇದು ಇನ್ನೊಂದು ಬೆಂಗಳೊರೆ ಆಗಿ ಹೋಯ್ತು. ದುಬೈ ನ Emirats airline ನಲ್ಲಿ ಕೆಲಸ. ಇದು ಪ್ರಪಂಚದ ಅತ್ಯಂತ ಪ್ರಶಿದ್ದ ವಿಮಾನಗಳಲ್ಲಿ ಒಂದು. ಇಲ್ಲಿ ಎಲ್ಲರು ನಮ್ಮವರೇ, ಅದರಲ್ಲೂ ನನ್ನಂತಹ ಹುಡುಗರ ದೊಡ್ಡ ಗುಂಪೇ ಅಲ್ಲಿತ್ತು. ಬಿಡುವಿನ ಸಮಯದಲ್ಲಿ ಸಮೀಪದ ಎಲ್ಲ ಪ್ರದೇಶಗಳಿಗೆ ಹೋಗುತ್ತಿದ್ದೆವು. ಇಂದಿಗೂ ಇವೆಲ್ಲ ನನಗೆ ಕಣ್ಣಿಗೆ ಕಟ್ಟಿದಂತಿದೆ. ನನಗೆ ಈ ದುಬೈನ ಒಂದು ವರ್ಷದ ಅವಧಿ ಒಂದು ಇತಿಹಾಸಿಕ ತಿರುವು. ಅಲ್ಲಿ ನನ್ನನ್ನು ಮನೆಯನ್ನೇ ಮರೆಯುವಂತೆ ಆದರಾತಿಥ್ಯ ನೀಡಿದ, ಅಲ್ಲಿ ನೆಲೆಸಿದ ಹವ್ಯಕ ಮಿತ್ರರನ್ನು ನಾನೆಂದೂ ಮರೆಯಲು ಸಾದ್ಯವೇ ಇಲ್ಲ.