Wednesday, October 28, 2009

ನಮ್ಮೂರ ಸೊಬಗು :)

ದೂರದ ಬೆಟ್ಟ ಕಣ್ಣೀಗೆ ನುಣ್ಣಗೆ ಅನ್ನೋ ಹಾಗೆ, ಹಿತ್ತಲಗಿಡ ಮದ್ದಲ್ಲ ಅನ್ನೋ ಮಾತು ಅಸ್ಟೇ ಸತ್ಯ. ನಾನು ಈ ಮಾತನ್ನ ಯಾಕೆ ಹೇಳುತ್ತಿದ್ದೇನೆಂದರೆ , ನಾವೆಲ್ಲ ಪ್ರವಾಸೀ ತಾಣಗಳನ್ನ ಹುಡುಕುತ್ತಾ ಎಸ್ಟೆಸ್ಟೋದೂರ ಹೋಗುತ್ತೇವೆ; ನಮ್ಮ ಸುತ್ತಮುತ್ತವೇ ಇರುವ ಸುಂದರ ಪ್ರಕ್ರತಿ ಸೊಬಗನ್ನ ಮರೆತೇ ಬಿಡುತ್ತೇವೆ. ನಿಜವಗಲೂ ನಮಗೆ ನಮ್ಮ ಸುತ್ತಮುತ್ತವೇ ಇರುವ ತಾಣಗಳು ಹಾಗೂ ಅದರ ಸೌಂದರ್ಯಗಳ ಅರಿವೆ ಇರುವದಿಲ್ಲ.

ಮೊನ್ನೆ ದೀಪಾವಳಿ ಹಬ್ಬಕೆಂದು ಊರಿಗೆ ಹೋದಾಗ ನಮ್ಮ ಮನೆ, ತೋಟ, ಗದ್ದೆ ಗುಡ್ಡಗಳನ್ನ ಸುತ್ತಾಡುತ್ತಾ ತೆಗೆದ ಕೆಲವು ಪಿಕ್ಸ್:





ಮತ್ತಸ್ಟು ಚಿತ್ರಗಳಿಗೆ ಇಲ್ಲಿ ಕ್ಲಿಕ್ಕಿಸಿ http://picasaweb.google.com/manns.bhat/Manns_deepavali#



Friday, October 16, 2009

ದೀಪಾವಳಿಯ ಶುಭಾಶಯಗಳು!!!


ಈ ವರ್ಷದ ದೀಪಾವಳಿ ಹಬ್ಬ,ನನ್ನ ಪಾಲಿಗೆ ಪ್ರತಿ ವರ್ಷದಂತಲ್ಲ , ಏನೋ ವಿಶೇಷ ಇದೆ. ದೀಪಾವಳಿ ಅಂದರೇನೇ ವಿಶೇಷೆ, ಮತ್ತೆ ಅದು ನನಗೊಬ್ಬನಿಗೇ ಹೇಗೆವಿಶೇಷ ಅಂದುಕೊಂಡ್ರಾ? ಮದುವೆಯಾದ ಮೇಲೆ ಮೊದಲ ದೀಪಾವಳಿ. ಅದಕ್ಕಾಗೇ ವಿಶೇಷ ಅಂದಿದ್ದು. ದೀಪಾವಳಿ ನಮಗೆಲ್ಲ ಅತಿ ದೊಡ್ಡ ಹಬ್ಬ. ಮನೆಯಲ್ಲಿವಿಜ್ರಮ್ಭಣೆಯಿಂದ ಆಚರಿಸುತ್ತೇವೆ. ಆದರೆ ಈ ಸಲ ಹಾಗಲ್ಲ , ಅಂದರೆ ಮನೆಯಲ್ಲಲ್ಲ ಮಾವನ ಮನೆಯಲ್ಲಿ ಆಚರಿಸಬೇಕು.

ದೀಪಾವಳಿಗೆ ಇನ್ನೂ ಒಂದು ವಾರವಿದ್ದಾಗ ಯೋಚಿಸಿದೆ. ನನ್ನಾಕೆಗೆ ಏನಾದ್ರೂ ಗಿಫ್ಟ್ ಕೊಡಬೇಕು, ಮದುವೆಯಾದ ಮೇಲೆ ಮೊದಲ ದೀಪಾವಳಿ, ನನಗೂ ಹಾಗೂ ಅವಳಿಗೂ ಹೊಸ ಬಟ್ಟೆಯನ್ನ ತೆಗೆದು ಕೊಳ್ಳಬೇಕು ಅಂತೆಲ್ಲಾ ಯೋಚಿಸುತ್ತಿದ್ದೆ. ತಕ್ಷಣಕ್ಕೆ ನೆನಪಾಗಿದ್ದು ಉತ್ತರ ಕರ್ನಾಟಕ ಸಂತ್ರಸ್ತರು. ಅತೀವ್ರಸ್ಟಿಯಿಂದ ಕಷ್ಟಕ್ಕೊಳಗಾದ ಜನತೆ, ಅವರ ಮನೆಯಲ್ಲಿ ದೀಪಾವಳಿ ಹೇಗಿರಬಹುದೆಂದೆಲ್ಲಾ ಯೋಚಿಸಿದೆ. ತಕ್ಷಣ ನನ್ನ ನರ್ಧಾರ ಬದಲಿಸಿದೆ. ದೀಪಾವಳಿಯನ್ನ ಸಿಂಪಲೆ ಆಗಿ
ಆಚರಸಬೇಕೆಂದು ಅಂದುಕೊಂಡೆ. ನನ್ನೆಲ್ಲ ಶಾಪಿಂಗ್ ರದ್ದುಮಾಡಿದೆ.

ಅದ್ದೂರಿಯಂದ ಆಚರಿಸಿದರೆ ಮಾತ್ರ ಅದು ಹಬ್ಬವಾಗುವದಿಲ್ಲ, ಹಬ್ಬಗಳನ್ನ ಸಿಂಪಲೆ ಆಗಿ ಮನೆಯವರೊಂದಿಗೆ ಅಚ್ಚುಕಟ್ಟಾಗಿಯೂ ಆಚರಿಸಬಹುದು. ಹಾಗೇಮಾಡುವದರಿಂದ ಅನವಸ್ಯಕವಗಿ ಮಾಡುವ ದುಂದುವೆಚ್ಚವನ್ನ ತಪ್ಪಿಸಬಹುದು. ಮನಸ್ಸಿಗೆ ಹೆಚ್ಚಿನ ನೆಮ್ಮದಿ ಹಾಗೂ ಶಾಂತಿ ಇರುತ್ತದೆ.

ಈ ದೀಪಾವಳಿ ಹಬ್ಬ ಎಲ್ಲರ ಮನೆ ಮನವನ್ನ ಬೆಳಗಲಿ. ಮುಂಬರುವ ದಿನಗಳಲ್ಲಿ ಎಲ್ಲರ ಬಾಳು ಬೆಳಗಲಿ, ವಿಶೇಷವಾಗಿ
ಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನತೆ ಹೊಸ ಬೆಳಕನ್ನ ಕಾಣುವಂತಾಗಲಿ ಎಂದು ಹಾರೈಸುತ್ತೇನೆ.

Friday, October 09, 2009

Cost of Living

Again one more long weekend gone. Oct 2nd Friday, Gandhi Jayanti, so this week again, we got a long weekend. This time I was thinking that why I can’t do savings even though Am getting decent salary. Got puzzled, then I started counting my last month(Sep) expenses, rent, transportation, food, shopping, bills and so on.. When it crossed 25K, I stopped counting. Oh my goodness, 25k is the expense for a month. Again start thinking where all can I minimize my expense, somehow I can manage to save 8K and rest of them are compulsory expenses.


Now 2 flash back, when I was in Belgaum, studding MCA, my whole year expense never crossed 25K. And my entire 3 year degree expense is less then this amount; even my 1 to 12th standard expense was far less then today’s my single month expense.


It depends on many factors, mainly its because of cost of living in that place. Other factors could be our life style, money value.


Again that was the time when cost of living was pretty less, and life style also so simple. Today every thing is quite expensive; our life style has also changed accordingly.


We start coping others, we start living for others and end up with 2days situation. There is so many gr8 persons like Mahatma Gandhi, Vivekananda,

They lived their life with simplicity and set the model for the others to follow.


What can we do now, sorry, what we should do; first thing, we should stop using credit cards and credit life. We should not copy others, should do what we feel good and comfortable.

One should live as simple as it could be.. what u say ???

Saturday, October 03, 2009

ಸ್ನೇಹಿತರೇ, ಉತ್ತರ ಕರ್ನಾಟಕ ಕಷ್ಟದಲ್ಲಿದೆ, ನೆರವಾಗಿ!

ಶನಿವಾರ ಸಂಜೆ ಮನೆಯಲ್ಲಿ ಟಿವಿ ನೋಡ್ತಿದ್ದೆ. ಅದಾಗಲೇ ೯ ಘಂಟೆ ಆಗಿತ್ತು. ಮನೆಯಿಂದ ಫೋನ್ ಬಂತು, ಮಳೆ ಹೇಗಿದೆ ಬೆಂಗಳೂರಲ್ಲಿ ಅಂತ ವಿಚಾರಸ್ತಿದ್ರು, ಇಲ್ಲಿ ನಾರ್ಮಲ್ ಅಂದೇ, ಅಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರೋ ಮಳೆ ಇನ್ನೂ ಮುಂದುವರಿದಿತ್ತು.
ವಾರ್ತೆ ನೋಡೋದಕ್ಕೆ ಕಷ್ಟ ಆಗ್ತಿತ್ತು, ಆದ್ರೂ ಇವತ್ತಿನ ಪರಿಸ್ತಿತಿ ನೋಡೋಣ ಅಂತ ಟಿವಿ ೯ ವಾರ್ತೆ ಹಚ್ಚಿದೆ. ಮಳೆರಾಯನ ಆರ್ಭಟ ಉತ್ತರ ಕರ್ನಾಟಕದಲ್ಲಿ ಹಾಗೆ ಮುಂದುವರಿದಿತ್ತು. ಭಾಗಶಃ ಉತ್ತರ ಕರ್ನಾಟಕ ಜಲಾವ್ರತ್ತವಗಿತ್ತು. ಅದೆಸ್ಟೋ ಮನೆ ಮಠ ಜನ ಜಾನುವಾರು, ಶಾಲೆಕಾಲೇಜುಗಳು ನೀರಿನಲ್ಲಿ. ಪ್ರಕ್ರತಿಯ ರುದ್ರ ನರ್ತನ ಈ ಸಲ ಅದೆಲ್ಲೋ ದೂರದ ಊರಿನಲ್ಲಗಿರಲಿಲ್ಲ;ಇದು ನಮ್ಮ ಉತ್ತರ ಕರ್ನಾಟಕದಲ್ಲಿ.
ಟಿವಿಯಲ್ಲಿ ನೋಡುವದಕ್ಕೆ ನಮಗೇ ಇಸ್ಟೊಂದು ಕಷ್ಟ ವಾಗುತ್ತಿದೆ, ಇದನ್ನೆಲ್ಲಾ ಅನುಭವಿಸುತ್ತಿರುವವರ ಪಾಡೇನು ?? ಇಂತಹ ಪರಿಸ್ಥಿತಿಯಲ್ಲೂ ನಮ್ಮ ರಾಜಕಾರಿಣಿಗಳು ಒಬ್ಬರನ್ನೊಬ್ಬರು ಧೂಷಣೆಯಲ್ಲಿ ತೊಡಗಿರುವದನ್ನ ನೋಡಿ ಅಸಹ್ಯ ವಾಯಿತು. ಯಾಕೆ ಹೀಗೆಲ್ಲ ಆಗ್ತಿದೆ? ಒಂದು ತಿಂಗಳ ಹಿಂದಸ್ಟೇ ನಮ್ಮ ಜನ ಮಳೆಯಿಲ್ಲ ,ಕರೆಂಟ್ ಇಲ್ಲ, ಬೆಳೆ ಇಲ್ಲ ಎಂದು ಕಂಗಾಲಾಗಿದ್ದರು. ನಂತರ ಹಂದಿ ಜ್ವರ ಶುರು ಮಾಡ್ಕೊಂಡ್ತು, ಈಗ ಜೊತೆಗೆ ಅತಿವ್ರಸ್ಟಿ. ನನ್ನಿಂದ ನೋಡ್ಲಿಕ್ಕೆ ಆಗದೆ ಟಿವಿ ಬಂದು ಮಾಡಿದೆ,ನಾವು ಇಲ್ಲಿ ಟಿವಿ ಬಂದು ಮಾಡಿದ್ರೆ ಅಲ್ಲಿ ಅವ್ರ ಕಸ್ಟನು ಬಂದಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅನ್ಸ್ತು.
ನಾನು ನಮ್ಮಿಂದಾದ ಅಲ್ಪ ಸಹಾಯವನ್ನ ಸಂತ್ರಸ್ತರಿಗೆ ಮಾಡೋಣ ಅಂದುಕೋತೀನಿ. ಹಾಗೆ ತಮಗೆಲ್ಲರಿಗೂ ನನ್ನ ವಿನಮ್ರ ವಿನಂತಿಯೇನೆಂದರೆ , ಕಸ್ಟದಲ್ಲಿರುವವರಿಗೆ ನೆರವಾಗಿ, ಮಾನವೀಯತೆ ಮೆರೆಯಿರಿ.