Saturday, October 03, 2009

ಸ್ನೇಹಿತರೇ, ಉತ್ತರ ಕರ್ನಾಟಕ ಕಷ್ಟದಲ್ಲಿದೆ, ನೆರವಾಗಿ!

ಶನಿವಾರ ಸಂಜೆ ಮನೆಯಲ್ಲಿ ಟಿವಿ ನೋಡ್ತಿದ್ದೆ. ಅದಾಗಲೇ ೯ ಘಂಟೆ ಆಗಿತ್ತು. ಮನೆಯಿಂದ ಫೋನ್ ಬಂತು, ಮಳೆ ಹೇಗಿದೆ ಬೆಂಗಳೂರಲ್ಲಿ ಅಂತ ವಿಚಾರಸ್ತಿದ್ರು, ಇಲ್ಲಿ ನಾರ್ಮಲ್ ಅಂದೇ, ಅಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರೋ ಮಳೆ ಇನ್ನೂ ಮುಂದುವರಿದಿತ್ತು.
ವಾರ್ತೆ ನೋಡೋದಕ್ಕೆ ಕಷ್ಟ ಆಗ್ತಿತ್ತು, ಆದ್ರೂ ಇವತ್ತಿನ ಪರಿಸ್ತಿತಿ ನೋಡೋಣ ಅಂತ ಟಿವಿ ೯ ವಾರ್ತೆ ಹಚ್ಚಿದೆ. ಮಳೆರಾಯನ ಆರ್ಭಟ ಉತ್ತರ ಕರ್ನಾಟಕದಲ್ಲಿ ಹಾಗೆ ಮುಂದುವರಿದಿತ್ತು. ಭಾಗಶಃ ಉತ್ತರ ಕರ್ನಾಟಕ ಜಲಾವ್ರತ್ತವಗಿತ್ತು. ಅದೆಸ್ಟೋ ಮನೆ ಮಠ ಜನ ಜಾನುವಾರು, ಶಾಲೆಕಾಲೇಜುಗಳು ನೀರಿನಲ್ಲಿ. ಪ್ರಕ್ರತಿಯ ರುದ್ರ ನರ್ತನ ಈ ಸಲ ಅದೆಲ್ಲೋ ದೂರದ ಊರಿನಲ್ಲಗಿರಲಿಲ್ಲ;ಇದು ನಮ್ಮ ಉತ್ತರ ಕರ್ನಾಟಕದಲ್ಲಿ.
ಟಿವಿಯಲ್ಲಿ ನೋಡುವದಕ್ಕೆ ನಮಗೇ ಇಸ್ಟೊಂದು ಕಷ್ಟ ವಾಗುತ್ತಿದೆ, ಇದನ್ನೆಲ್ಲಾ ಅನುಭವಿಸುತ್ತಿರುವವರ ಪಾಡೇನು ?? ಇಂತಹ ಪರಿಸ್ಥಿತಿಯಲ್ಲೂ ನಮ್ಮ ರಾಜಕಾರಿಣಿಗಳು ಒಬ್ಬರನ್ನೊಬ್ಬರು ಧೂಷಣೆಯಲ್ಲಿ ತೊಡಗಿರುವದನ್ನ ನೋಡಿ ಅಸಹ್ಯ ವಾಯಿತು. ಯಾಕೆ ಹೀಗೆಲ್ಲ ಆಗ್ತಿದೆ? ಒಂದು ತಿಂಗಳ ಹಿಂದಸ್ಟೇ ನಮ್ಮ ಜನ ಮಳೆಯಿಲ್ಲ ,ಕರೆಂಟ್ ಇಲ್ಲ, ಬೆಳೆ ಇಲ್ಲ ಎಂದು ಕಂಗಾಲಾಗಿದ್ದರು. ನಂತರ ಹಂದಿ ಜ್ವರ ಶುರು ಮಾಡ್ಕೊಂಡ್ತು, ಈಗ ಜೊತೆಗೆ ಅತಿವ್ರಸ್ಟಿ. ನನ್ನಿಂದ ನೋಡ್ಲಿಕ್ಕೆ ಆಗದೆ ಟಿವಿ ಬಂದು ಮಾಡಿದೆ,ನಾವು ಇಲ್ಲಿ ಟಿವಿ ಬಂದು ಮಾಡಿದ್ರೆ ಅಲ್ಲಿ ಅವ್ರ ಕಸ್ಟನು ಬಂದಗಿದ್ದಿದ್ರೆ ಎಷ್ಟು ಚೆನ್ನಾಗಿರ್ತಿತ್ತು ಅನ್ಸ್ತು.
ನಾನು ನಮ್ಮಿಂದಾದ ಅಲ್ಪ ಸಹಾಯವನ್ನ ಸಂತ್ರಸ್ತರಿಗೆ ಮಾಡೋಣ ಅಂದುಕೋತೀನಿ. ಹಾಗೆ ತಮಗೆಲ್ಲರಿಗೂ ನನ್ನ ವಿನಮ್ರ ವಿನಂತಿಯೇನೆಂದರೆ , ಕಸ್ಟದಲ್ಲಿರುವವರಿಗೆ ನೆರವಾಗಿ, ಮಾನವೀಯತೆ ಮೆರೆಯಿರಿ.

2 comments:

  1. Manns please mention the address also to whom we have to help.

    ReplyDelete
  2. Gourish,there r many people from Karnataka, Andra, and Maharashtra are affected by flood.Its difficalt 2 mention any one, there are many means opened 2 reach the affected ppls.

    ReplyDelete