Friday, October 16, 2009

ದೀಪಾವಳಿಯ ಶುಭಾಶಯಗಳು!!!


ಈ ವರ್ಷದ ದೀಪಾವಳಿ ಹಬ್ಬ,ನನ್ನ ಪಾಲಿಗೆ ಪ್ರತಿ ವರ್ಷದಂತಲ್ಲ , ಏನೋ ವಿಶೇಷ ಇದೆ. ದೀಪಾವಳಿ ಅಂದರೇನೇ ವಿಶೇಷೆ, ಮತ್ತೆ ಅದು ನನಗೊಬ್ಬನಿಗೇ ಹೇಗೆವಿಶೇಷ ಅಂದುಕೊಂಡ್ರಾ? ಮದುವೆಯಾದ ಮೇಲೆ ಮೊದಲ ದೀಪಾವಳಿ. ಅದಕ್ಕಾಗೇ ವಿಶೇಷ ಅಂದಿದ್ದು. ದೀಪಾವಳಿ ನಮಗೆಲ್ಲ ಅತಿ ದೊಡ್ಡ ಹಬ್ಬ. ಮನೆಯಲ್ಲಿವಿಜ್ರಮ್ಭಣೆಯಿಂದ ಆಚರಿಸುತ್ತೇವೆ. ಆದರೆ ಈ ಸಲ ಹಾಗಲ್ಲ , ಅಂದರೆ ಮನೆಯಲ್ಲಲ್ಲ ಮಾವನ ಮನೆಯಲ್ಲಿ ಆಚರಿಸಬೇಕು.

ದೀಪಾವಳಿಗೆ ಇನ್ನೂ ಒಂದು ವಾರವಿದ್ದಾಗ ಯೋಚಿಸಿದೆ. ನನ್ನಾಕೆಗೆ ಏನಾದ್ರೂ ಗಿಫ್ಟ್ ಕೊಡಬೇಕು, ಮದುವೆಯಾದ ಮೇಲೆ ಮೊದಲ ದೀಪಾವಳಿ, ನನಗೂ ಹಾಗೂ ಅವಳಿಗೂ ಹೊಸ ಬಟ್ಟೆಯನ್ನ ತೆಗೆದು ಕೊಳ್ಳಬೇಕು ಅಂತೆಲ್ಲಾ ಯೋಚಿಸುತ್ತಿದ್ದೆ. ತಕ್ಷಣಕ್ಕೆ ನೆನಪಾಗಿದ್ದು ಉತ್ತರ ಕರ್ನಾಟಕ ಸಂತ್ರಸ್ತರು. ಅತೀವ್ರಸ್ಟಿಯಿಂದ ಕಷ್ಟಕ್ಕೊಳಗಾದ ಜನತೆ, ಅವರ ಮನೆಯಲ್ಲಿ ದೀಪಾವಳಿ ಹೇಗಿರಬಹುದೆಂದೆಲ್ಲಾ ಯೋಚಿಸಿದೆ. ತಕ್ಷಣ ನನ್ನ ನರ್ಧಾರ ಬದಲಿಸಿದೆ. ದೀಪಾವಳಿಯನ್ನ ಸಿಂಪಲೆ ಆಗಿ
ಆಚರಸಬೇಕೆಂದು ಅಂದುಕೊಂಡೆ. ನನ್ನೆಲ್ಲ ಶಾಪಿಂಗ್ ರದ್ದುಮಾಡಿದೆ.

ಅದ್ದೂರಿಯಂದ ಆಚರಿಸಿದರೆ ಮಾತ್ರ ಅದು ಹಬ್ಬವಾಗುವದಿಲ್ಲ, ಹಬ್ಬಗಳನ್ನ ಸಿಂಪಲೆ ಆಗಿ ಮನೆಯವರೊಂದಿಗೆ ಅಚ್ಚುಕಟ್ಟಾಗಿಯೂ ಆಚರಿಸಬಹುದು. ಹಾಗೇಮಾಡುವದರಿಂದ ಅನವಸ್ಯಕವಗಿ ಮಾಡುವ ದುಂದುವೆಚ್ಚವನ್ನ ತಪ್ಪಿಸಬಹುದು. ಮನಸ್ಸಿಗೆ ಹೆಚ್ಚಿನ ನೆಮ್ಮದಿ ಹಾಗೂ ಶಾಂತಿ ಇರುತ್ತದೆ.

ಈ ದೀಪಾವಳಿ ಹಬ್ಬ ಎಲ್ಲರ ಮನೆ ಮನವನ್ನ ಬೆಳಗಲಿ. ಮುಂಬರುವ ದಿನಗಳಲ್ಲಿ ಎಲ್ಲರ ಬಾಳು ಬೆಳಗಲಿ, ವಿಶೇಷವಾಗಿ
ಕಷ್ಟದಲ್ಲಿರುವ ಉತ್ತರ ಕರ್ನಾಟಕದ ಜನತೆ ಹೊಸ ಬೆಳಕನ್ನ ಕಾಣುವಂತಾಗಲಿ ಎಂದು ಹಾರೈಸುತ್ತೇನೆ.

5 comments:

  1. ಮಂಜು
    ನಿನ್ನ ಕುಟುಂಬಕ್ಕೆ ದೀಪವ್ವಲಿ ಹಬ್ಬದ ಶುಭಾಶಯಗಳು
    ನಿನ್ನ ಆಶಯ ಸರಿ ಇದೆ,
    ಹಬ್ಬ ಸರಳ ಇರಲಿ
    ಪ್ರೀತಿ ಹೆಚ್ಚುತಲಿರಲಿ

    ReplyDelete
  2. ವಿಜೃಂಭಣೆ ಅಲ್ವ? ತಪ್ಪು ಹುಡುಕ್ತಾ ಇಲ್ಲ. ಕೀಲಿಮಣೆ ಕುಟ್ಬೇಕಾದ್ರೆ ಆಗಿರುವ ತಪ್ಪಿರ್ಬೇಕು ಅಂತ ಅಷ್ಟೆ.
    ಯಲ್ಲಾಪುರದವರ ಬ್ಲಾಗ್ ಇದು ೩ನೆಯದು ಖುಷಿ ಆಗುತ್ತೆ. ನಾನು ಯಲ್ಲಾಪುರದವನಲ್ಲ ಆದರೆ ಅದಕ್ಕೆ ಮಾರು ಹೋಗಿದ್ದೇನೆ

    ReplyDelete
  3. ನಿಜ, ಈ ಸಲ ದೀಪಾವಳಿ ಉತ್ತರ ಕರ್ನಾಟಕದವರಿಗೆ ಕತ್ತಲೆ ಹಬ್ಬವಾಯಿತು. ನಿಮ್ಮ ಕಳಕಳಿ ಛೊಲೊ ಇತ್ತು.

    ಹವ್ಯಕ ಗಾದೆಗಳನ್ನೋದಿ ಖುಶಿ ಆತು. ನಾನೂ ಹವ್ಯಕ ಆಗಿದ್ದಕ್ಕೇನೋ ಏನೊ...

    ReplyDelete
  4. Nimma aalochane sari itthu. Nimibbara hosa habba kashtadalli iddavarige kala kali thorisi acharisiddu manasige muda needithu. Nimma mathu nimma maneyavarige harthika deepavali shubashayagalu. Swalpa late aythu wish madiddu.

    ReplyDelete
  5. ತಡವಾಗಿ ಶುಭಾಶಯಗಳನ್ನು ಹೇಳುತ್ತಿದ್ದೇನೆ. ಉತ್ತಮ ಆಲೋಚನೆಗಳ ಮೂಲಕ ಮನದ ಮೂಲೆಯ ಕತ್ತಲೆಯನ್ನು ಹೊಸ ಆಶಾಕಿರಣದಿಂದ ಓಡಿಸುವ ನಿಮ್ಮ ಯತ್ನ ತುಂಬಾ ಚೆನ್ನಾಗಿದೆ. ಹೊಸ ಬಾಳಿನಲ್ಲಿ ಪಯಣಿಸುತ್ತಿರುವ ನಿಮಗಿಬ್ಬರಿಗೂ ಮತ್ತೊಮ್ಮೆ ಹಾರ್ದಿಕ ಶುಭಾಶಯಗಳು.

    ReplyDelete