ಒಂದುಕಡೆ ದುಡ್ಡಿದ್ರೆ ಏನು ಬೇಕಾದರು ಮಾಡಬಹುದು ಅಂತ ಅಂದ್ಕೊಂಡಿರೋ ರೆಡ್ಡಿ ಬ್ರದರ್ಸ್, ಮತೊಂದೆಡೆ ನಾನೇ ಸರ್ವಾಧಿಕಾರಿ ಅಂತ ಅಂದ್ಕೊಂಡಿರೋ ಯಡ್ಡಿ. ಇವ್ರಿಗೆಲ್ಲ ತಮ್ಮ ಕೆಲಸ ಏನು , ಯಾಕೆ ಜನ ನಮ್ಮ ಆರಿಸಿ ಕಳ್ಸಿರೋದು ಅಂತ ಏನಾದ್ರು ಜ್ಞಾನ ಇದೆ ಅಂತಿರ? ಇದ್ದಿದ್ರೆ ಖಂಡಿತ ಹೀಗೆ ಮಾಡ್ತಿರಲಿಲ್ಲ..
ಇದು ಒಬ್ಬ ,ಇಬ್ಬರ ಜಗಳ ಅಲ್ಲ, ನಮ್ಮ ಎಲ್ಲ ರಾಜಕಾರಣಿಗಳ ಕಥೆ. ಇಲ್ಲಿ ಯಾರು ಸಾಛಾರಿಲ್ಲ. ನಮ್ಮ ಗುರುಗಳೊಬ್ಬರು ಹೇಳ್ತಿದ್ದರು, ರಾಜ ಕಾರಣ ಅಂದ್ರೇನೆ ಹಾಗೆ , ಇಲ್ಲಿ ಯಾರು ಒಳ್ಳೆವರು ಅಂತ ನೋಡೋದಕ್ಕೆ ಆಗೋದಿಲ್ಲ , ಕಡಿಮೆ ಕೆಟ್ಟವರು ಯಾರು ಅಂತ ನೋಡ್ಬೇಕಗೊತ್ತೆ ಅಂತ.. ಆದ್ರೆ ಇವತ್ತು ಅಂತವರೂ ಸಿಗೋದಿಲ್ವಲ್ಲ ಅನ್ನೋ ಹಾಗಾಗಿದೆ. ಹಾಗಿದ್ದರೆ ಇದಕ್ಕೆಲ್ಲ ಪರಿಹಾರವೇ ಇಲ್ವಾ? ನಮ್ಮ ದೇಶ, ರಾಜ್ಯಗಳು ಇಂತ ದುಷ್ಟ ರಾಜಕಾರಿಣಿಗಳ ಕೈಯಲ್ಲೇ ಇರಬೇಕಾ?? ಇದಕ್ಕೆಲ್ಲ ಪರಿಹಾರ ಎಂದು?? ಇದ್ದರೆ ಹೇಗೆ? ಏನು ?
ನಂಗೆ ಅನಿಸೊತ್ತೆ ನಮ್ಮ ದೇಶದ ರಾಜಕೀಯದಲ್ಲಿ ಈ ಕೆಲವು ಬದಲಾವಣೆಗಳಾಗಬೇಕಿದೆ...
೧. ಚುನಾವಣೆಗೆ ನಿಲ್ಲಬೇಕಾದರೆ ಅಬ್ಯರ್ಥಿ ಕನಿಷ್ಠ ಪದಿವಿಯನ್ನಾದ್ರು ಓದಿರಬೇಕು.
೨.ಅಬ್ಯಾರ್ಥಿಯ ಒಟ್ಟು ಆದಾಯ ೧ ಕೋಟಿ ದಾಟಿರಬಾರದು.
೩ ಒಬ್ಬ ವ್ಯಕ್ತಿ ರಾಜಕೀಯದಲ್ಲಿ ಗರಿಷ್ಠ ೨ ಅವಧಿಗೆ ಮಾತ್ರ ಇರಬುದು. ನಂತರ ಕಡ್ಡಾಯವಾಗಿ ನಿವ್ರತ್ತರಾಗಬೇಕು
೪ ಯಾವುದೇ ಕ್ರಿಮಿನಲ್ ಅಪರಾದದ ಹಿನ್ನೆಲೆ ಇರಬಾರದು
೫ ರಾಜಕಾರಣಿಗಳಿಗೆ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೇಲೆ ಯಾವುದೇ ಅಧಿಕಾರ ಇರಬಾರದು.
೬ ಎಲ್ಲದಕಿಂತ ಮುಖ್ಯವಾಗಿ ಕಡ್ಡಾಯ ಮತದಾನವಾಗಬೇಕು.