Friday, November 06, 2009

ನಮಗೆ ಇಂತವರು ಬೇಕಾ???

ಕಳೆದ ಕೆಲವು ದಿನಗಳಿಂದ ಕರ್ನಾಟಕದ ರಾಜಕೀಯ ನಾಟಕ ನೋಡಿದರೆ, ಮೈಯೆಲ್ಲಾ ಉರಿಯುತ್ತದೆ. ಅದ್ಯಾವುದೋ ದೊರೆ ದೇಶ ಹೊತ್ತಿ ಉರಿತಿದ್ದರೆ ಬೆಚ್ಚಗೆ ಚಳಿ ಕಾಸ್ತಿದ್ನಂತೆ ಅನ್ದಾಂಗೆ ನಮ್ಮ ಜನ ಪ್ರತಿನಿದಿಗಳು ತಮ್ಮ ಕರ್ತವ್ಯ ಮರೆತು ಆರಾಮಾಗಿ ಹೈದರಾಬಾದ್, ಗೋವಾ , ಡೆಲ್ಲಿ ಅಂತ ಮೋಜು ಮಾಡ್ತಿದ್ದಾರೆ. ಉತ್ತರ ಕರ್ನಾಟಕ ನೆರೆ ಪರಿಹಾರ ನಡಿಬೇಕಗಿತ್ತು; ಆದ್ರೆ ಇವ್ರಿಗೆ ಅದರ ಬಗ್ಗೆ ಕಾಳಜಿನೆ ಇಲ್ಲ. ಇವ್ರಿಗೆ ಆರ್ಸಿ ಕಳಿಸಿದ ಜನಕಿಂತ ಅಧಿಕಾರ, ಹಣ, ಒಣ ಪ್ರತಿಷ್ಠೆಯೇ ಮುಖ್ಯವಾಗಿದೆ.

ಒಂದುಕಡೆ ದುಡ್ಡಿದ್ರೆ ಏನು ಬೇಕಾದರು ಮಾಡಬಹುದು ಅಂತ ಅಂದ್ಕೊಂಡಿರೋ ರೆಡ್ಡಿ ಬ್ರದರ್ಸ್, ಮತೊಂದೆಡೆ ನಾನೇ ಸರ್ವಾಧಿಕಾರಿ ಅಂತ ಅಂದ್ಕೊಂಡಿರೋ ಯಡ್ಡಿ. ಇವ್ರಿಗೆಲ್ಲ ತಮ್ಮ ಕೆಲಸ ಏನು , ಯಾಕೆ ಜನ ನಮ್ಮ ಆರಿಸಿ ಕಳ್ಸಿರೋದು ಅಂತ ಏನಾದ್ರು ಜ್ಞಾನ ಇದೆ ಅಂತಿರ? ಇದ್ದಿದ್ರೆ ಖಂಡಿತ ಹೀಗೆ ಮಾಡ್ತಿರಲಿಲ್ಲ..

ಇದು ಒಬ್ಬ ,ಇಬ್ಬರ ಜಗಳ ಅಲ್ಲ, ನಮ್ಮ ಎಲ್ಲ ರಾಜಕಾರಣಿಗಳ ಕಥೆ. ಇಲ್ಲಿ ಯಾರು ಸಾಛಾರಿಲ್ಲ. ನಮ್ಮ ಗುರುಗಳೊಬ್ಬರು ಹೇಳ್ತಿದ್ದರು, ರಾಜ ಕಾರಣ ಅಂದ್ರೇನೆ ಹಾಗೆ , ಇಲ್ಲಿ ಯಾರು ಒಳ್ಳೆವರು ಅಂತ ನೋಡೋದಕ್ಕೆ ಆಗೋದಿಲ್ಲ , ಕಡಿಮೆ ಕೆಟ್ಟವರು ಯಾರು ಅಂತ ನೋಡ್ಬೇಕಗೊತ್ತೆ ಅಂತ.. ಆದ್ರೆ ಇವತ್ತು ಅಂತವರೂ ಸಿಗೋದಿಲ್ವಲ್ಲ ಅನ್ನೋ ಹಾಗಾಗಿದೆ. ಹಾಗಿದ್ದರೆ ಇದಕ್ಕೆಲ್ಲ ಪರಿಹಾರವೇ ಇಲ್ವಾ? ನಮ್ಮ ದೇಶ, ರಾಜ್ಯಗಳು ಇಂತ ದುಷ್ಟ ರಾಜಕಾರಿಣಿಗಳ ಕೈಯಲ್ಲೇ ಇರಬೇಕಾ?? ಇದಕ್ಕೆಲ್ಲ ಪರಿಹಾರ ಎಂದು?? ಇದ್ದರೆ ಹೇಗೆ? ಏನು ?

ನಂಗೆ ಅನಿಸೊತ್ತೆ ನಮ್ಮ ದೇಶದ ರಾಜಕೀಯದಲ್ಲಿ ಈ ಕೆಲವು ಬದಲಾವಣೆಗಳಾಗಬೇಕಿದೆ...
೧. ಚುನಾವಣೆಗೆ ನಿಲ್ಲಬೇಕಾದರೆ ಅಬ್ಯರ್ಥಿ ಕನಿಷ್ಠ ಪದಿವಿಯನ್ನಾದ್ರು ಓದಿರಬೇಕು.
೨.ಅಬ್ಯಾರ್ಥಿಯ ಒಟ್ಟು ಆದಾಯ ೧ ಕೋಟಿ ದಾಟಿರಬಾರದು.
೩ ಒಬ್ಬ ವ್ಯಕ್ತಿ ರಾಜಕೀಯದಲ್ಲಿ ಗರಿಷ್ಠ ೨ ಅವಧಿಗೆ ಮಾತ್ರ ಇರಬುದು. ನಂತರ ಕಡ್ಡಾಯವಾಗಿ ನಿವ್ರತ್ತರಾಗಬೇಕು
೪ ಯಾವುದೇ ಕ್ರಿಮಿನಲ್ ಅಪರಾದದ ಹಿನ್ನೆಲೆ ಇರಬಾರದು
೫ ರಾಜಕಾರಣಿಗಳಿಗೆ ಕಾರ್ಯಾಂಗ ಮತ್ತು ನ್ಯಾಯಾಂಗಗಳ ಮೇಲೆ ಯಾವುದೇ ಅಧಿಕಾರ ಇರಬಾರದು.
೬ ಎಲ್ಲದಕಿಂತ ಮುಖ್ಯವಾಗಿ ಕಡ್ಡಾಯ ಮತದಾನವಾಗಬೇಕು.

8 comments:

 1. nimma ella vicharagalige nanna sammatavide.olleya baraha..

  ReplyDelete
 2. ಸಧ್ಯದ ಪರಿಸ್ಥಿತಿಯಲ್ಲಿ ಈ ಗುಣಗಳು ಇದ್ದರೆ ಮಾತ್ರ ಜನ ಹೋಟು ಹಾಕುತ್ತಾರೆ, ಜನರ ಹಗೆ ಜನ ಪ್ರತಿನಿಧಿ. ಮೊದಲು ಜನ ಬದಲಾಗ ಬೇಕು

  ReplyDelete
 3. Good Post!! .. Should take it seriously..

  ReplyDelete
 4. ಮಂಜು
  ಪದವೀದರರೂ ಬಂದ್ರೆ ಅವರೂ ಸ್ವಲ್ಪ ದಿನದಲ್ಲಿ ಹಾಗೆ ಆಗ್ತಾರೆ
  ಅದೊಂದು ವಿಷ ಜಂತುಗಳ ಜಾಲ
  ಮೊದಲು ಅಲ್ಲಿರೋ ಎಲ್ಲರನ್ನೂ ತೆಗಿಬೇಕು
  ಹೊಸ ಸೃಷ್ಟಿ ನಿರ್ಮಾಣ ಆಗಬೇಕು ರಾಜಕೀಯದಲ್ಲಿ

  ReplyDelete
 5. ಬೆಕ್ಕಿಗೆ ಘಂಟೆ ಕಟ್ಟುವ ಕೆಲಸ ಎಂದಾಗುವದೋ ನಾನೂ ಕೂಡಾ ಎದುರು ನೋಡುತ್ತಿದ್ದೇನೆ.

  ReplyDelete
 6. ಮಂಜು ಅವರೇ,
  ರೆಡ್ಡಿ, ಯೆಡ್ಡಿ ಮತ್ತೆ ಸೇರಿರೋದನ್ನ ನೋಡಿದ್ರೆ ಮತ್ತೆ ಪ್ರಳಯ ಆಗದೆ ಇರತ್ತಾ...? ನಿಮ್ಮ ಸಹಹೆ ಚೆನ್ನಾಗಿದೆ.... ಆದರೆ ಇದನ್ನ ಕಾರ್ಯಕ್ಕೆ ತರಬೇಕಾದವರು ಇವರೇ ಅಲ್ಲವೇ..... ಕಾರ್ಯರೂಪಕ್ಕೆ ತಂದರೂ ಇವರೆಲ್ಲ ಇನ್ನೊಂದು ಸಾರಿ ಗೆದ್ದುಬರೋಲ್ಲ....

  ReplyDelete
 7. ಮಂಜು, ನನಗೆ ಅನಿಸುವುದೇನಂದರೆ ಅಮೇರಿಕ ಹಾಗೆ ೨ ಪಾರ್ಟಿಗಳು ಇರಬೇಕು ಅಷ್ಟೇ. ಅದರಿಂದ ರಾಜಕಾರಣಿಗಳು ಒಬ್ಬರ ಮೇಲೆ ಒಬ್ಬರು ಮಣ್ಣು ಎರಚುವುದು ಕಡಿಮೆಯಾಗುತ್ತದೆ. "ಸಚಿನ್ ಪೈಲಟ್"ತರದ ತಿಳುವಳಿಕೆ ಉಳ್ಳವರು ಹಾಗು ಕಡಿಮೆ ವಯಸಿಗರು ರಾಜಕೀಯಕ್ಕೆ ಇಳಿದರೆ ನಮ್ಮ ಭಾರತ ಉಜ್ವಲ ಭವಿಷ್ಯವನ್ನು ಕಾಣಬಹುದು ಎಂಬ ಆಶಯ ಇದೆ.

  ReplyDelete