Monday, September 21, 2009

ಕಾಮಾಲೆ ಕಣ್ಣಿಗೆ ಜ‌ಗ‌ತ್ತೇ ಅರಿಶಿನ ಕಾಣುತ್ತದೆಯಂತೆ ...:(

ಬಹಳ ದಿನಗಳ ನಂತರ ನನ್ನ ವಯಕ್ತಿಕ ಈ-ಮೇಲ್ ನೋಡುತ್ತಿದ್ದೆ, ಬೆಂಗಳುರಿನ ಹವ್ಯಕ ಗುಂಪೊಂದರಲ್ಲಿ ಚ‌ರ್ಚೆಯಾಗುತ್ತಿದ್ದ ವಿಷಯ , ನಮ್ಮೆಲ್ಲರ ಪರಮ ಪೂಜ್ಯ ಗುರುಗಳಾದ ರಾಘವೇಶ್ವರ ಸ‌ರ‌ಸ್ವತಿ ಸ್ವಾಮಿಗಳ ಬಗೆಗೆ. ಇದನ್ನ ನೋಡಿ ನನಗೆ ನಮ್ಮವರ ಬಗ್ಗೆ ದುಃಖದ ಜೊತೆಗೆ ಅಸಹ್ಯ ವಾಯಿತು. ಇಲ್ಲಿ ವಿದ್ಯಾವಂತ , ಸಮಾಜದ ಘಣ್ಯರು, ತುಂಬಾ ಕೆಳ‌ಮ‌ಟ್ಟದ‌ಲ್ಲಿ ಚರ್ಚಿಸುತ್ತಿದ್ದರು. ಇವ‌ರುಗ‌ಳೆಲ್ಲ ಬೆರೊಬ್ಬರ‌ನ್ನ ದೂರುವ‌ದು ಹಾಗು ತ‌ಮ್ಮನ್ನ ಸಮರ್ತಿಸಿಕೋಳೊದಕ್ಕೆ ಹೆಚ್ಚಿನ ಆಸಕ್ತಿ ತೋರುತ್ತಿದ್ದರೇ ಹೊರತು ಸಮಾಜದ ಒಳಿತಿಗೆ ಯಾರಿಗೂ ಚಿಂತೆ ಇದ್ದಂತೆ ಕಾಣಲಿಲ್ಲ. ಆಕ್ಷಣ ನನಗೆ ಅನಿಸಿದ್ದು ಅನೆಯನ್ನ ಕಾಣದೆ ಇದ್ದ ನಾಲ್ವರು ಕುರುಡರು, ಆನೆಯ ಕಾಲು, ಕಿವಿ, ಸೊಂಡಿಲು , ಬಾಲ ಸ್ಪರ್ಶ ಮಾಡಿ ಅನೆ ಹಗ್ಗದ ಹಾಗಿದೆ, ಕಂಭದ ಹಾಗಿದೆ ಅಂತೆಲ್ಲ ಹೇಳಿದ ಕಥೆ ನೆನಪಾಯ್ತು. ಪೂಜ್ಯರು ನ‌ಮ್ಮೆಲ್ಲರ‌ ಆಚಾರ ವಿಚಾರಕಿಂತ ಬಹಳ ಎತ್ತರದಲ್ಲಿರುವವರು, ಸಮಾಜದ ಒಳಿತಿಗಾಗಿ ಶ್ರಮಿಸುತ್ತಿರುವವರು. ಅವರ ವಿಚಾರದಲ್ಲಿ ನಾವು ಚರ್ಚಿಸುವದು, ಕುರುಡರು ಆನೆಯನ್ನು ವರ್ಣಿಸಿದಂತೆ ಅನಿಸಿತು. ನಾವೆಲ್ಲಾ ನಮ್ಮ ಜವಾಭ್ದಾರಿಗಳನ್ನ ಅರಿತುಕೊಳ್ಳಬೇಕು. ಸಮಾಜದ ಘನತೆ ಗೌರವಗಳನ್ನ ಎತ್ತಿ ಹಿಡಿಯುವ ಕೆಲಸ ಮಾಡಬೇಕು. ಆಗದಿದ್ದರೆ ಸುಮ್ಮನಿರಬೇಕು , ಹಾಳುಮಾಡೊ ಕೆಲಸ ಮಾಡಬಾರದು ಅನ್ನಿಸಿತು.

2 comments: